ಪ್ರವೇಶಕ್ಕೆ ಸಂಭಂದಿಸಿದ ವಿಷಯ

ಅರ್ಜಿ ಹಾಕುವ ವಿಧಾನ

ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ, ದಕ್ಷಿಣ ಭಾರತದ ಅಂದರೆ ಕರ್ನಾಟಕ, ತೆಲಂಗಣಾ, ಆಂದ್ರಪ್ರದೇಶ, ತಮಿಳನಾಡು, ಕೇರಳಾ, ಪಾಂಡಿಚೇರಿ, ಮತ್ತು ಲಕ್ಷದ್ವೀಪ ಒಳಗೊಂಡು ಒಟ್ಟು 20 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರವೇಶಕ್ಕೆ ಕನಿಷ್ಟ ವಿದ್ಯಾ ಅರ್ಹತೆ

ಒಂದು ವರ್ಷದ ತೀವ್ರತಮ ಅಭಿನಯ ಕೋರ್ಸ್‍ಗೆ ಕನಿಷ್ಟ ವಿದ್ಯಾ ಅರ್ಹತೆ ಯಾವುದೆ ಅಧ್ಯಯನ ವಿಭಾಗದಲ್ಲಿ ಪದವಿಧರರಾಗಿರಬೇಕು ಅಥವಾ ಪದವಿಗೆ ಸಮನಾದ ವಿದ್ಯಾ ಅರ್ಹತೆ ಹೊಂದಿರಬೇಕು. ವಿಶೇಷವಾದ ಪ್ರತಿಭೆ ಇದ್ದವರಿಗೆ ಅಂದರೆ ಬುಡಕಟ್ಟಿನ, ಜಾನಪದ, ಮತ್ತು ಸಾಂಪ್ರದಾಯಿಕ ಕಲೆ ಪ್ರದರ್ಶನ ಜನಾಂಗಕ್ಕೆ ಸೇರಿರುತ್ತಾರೊ ಅಂತವರಿಗೆ ಪದವಿಧರರಾಗಿರಬೇಕು ಎಂದು ಕಡ್ಡಾಯವಲ್ಲ.

ವಯಸ್ಸು

ಈ ಕೋರ್ಸ್ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತೆರೆದಿದ್ದು, ವಯೋಮಿತಿ ಜೂಲೈ 1ರ 2017, ಕನಿಷ್ಟ 21 ರಿಂದ 30 ವರ್ಷದೊಳಗಿರಬೇಕು. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ರಿಯಾಯಿತಿ ಇರುತ್ತದೆ.

ಶಿಕ್ಷಣದ ಮಾದ್ಯಮ

ಶಿಕ್ಷಣ ಮಾದ್ಯಮದ ಭಾಷೆಯು ಇಂಗ್ಲಿಷ್‍ನಲ್ಲಿರುತ್ತದೆ. ಆದರೆ ಪರೀಕ್ಷೆಯ ಬರವಣಿಗೆ ಮತ್ತು ಪ್ರದರ್ಶನವು ದಕ್ಷಿಣ ಭಾರತದ (ಕನ್ನಡ, ತಮಿಳ, ತೆಲಗು, ಮಳಿಯಾಳಂ, ಇಂಗ್ಲಿಷ್) ಯಾವುದಾದರು ಒಂದು ಭಾಷೆಯಲ್ಲಿರುತ್ತದೆ ಅಥವಾ ಬಹುಭಾಷವಾಗಿರುತ್ತದೆ.

ಆಯ್ಕೆಯ ಪ್ರಕ್ರಿಯೆ

ಮೊದಲನೆಯದಾಗಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ನಂತರ ಅಯ್ಕೆಯಾದ ಅರ್ಜಿದಾರರನ್ನು ಪ್ರದರ್ಶನಕ್ಕೆ ಕರೆಯಲಾಗುವುದು.

ಇದು ವಸತಿ ಸಹಿತ ರಂಗ ಶಾಲೆಯಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳು ಎನ್.ಎಸ್.ಡಿ ಬೆಂಗಳೂರು ಸೆಂಟರ್‍ನ ವಿದ್ಯಾರ್ಥಿಗೃಹದಲ್ಲಿಯೇ ಇರಬೇಕು. ವಿದ್ಯಾರ್ಥಿಗಳಿಗೆ ಮಾಸಿಕ ಹಣ ತಿಂಗಳಿಗೆ 4500/- ವಿದ್ಯಾರ್ಥಿವೇತನ ನೀಡಲಾಗುತ್ತದೆ ಮತ್ತು ವಿದ್ಯಾರ್ಥಿಗೃಹದ ಶುಲ್ಕ ಮತ್ತು ಶಿಕ್ಷಣ ಶುಲ್ಕವನ್ನು ವಿದ್ಯಾರ್ಥಿವೇತನದಲ್ಲೆ ಕಡಿತಗೊಳಿಸಲಾಗುವುದು.

ಒಂದು ವರ್ಷದ ತೀವ್ರತಮ ಅಭಿನಯ ಕೋರ್ಸ್ ಬೆಂಗಳೂರು ಕೇಂದ್ರದ ಪಠ್ಯಕ್ರಮ

ಉಪ-ಸೆಮೆಸ್ಟರ್-1

1. ಈ ಉಪ-ಸೆಮಿಸ್ಟರ್ 10 ವಾರಗಳ ಅವಧಿಯಿರುತ್ತದೆ.

2. ಬುಡಕಟ್ಟು ಕಲೆ ರೂಪಾಂತರ, ಧಾರ್ಮಿಕ ಕೀಯಾ ವಿಧಿಗಳು, ಧಾರ್ಮಿಕ ಕೋರಿಕೆಯ ಮತ್ತು ಬುಡಕಟ್ಟು ಸಾಂಸ್ಕøತಿಯ ನಿರೂಪಣೆಗಳ ಪರಿಚಯಗಳನ್ನೊಳಗೊಂಡಿರುತ್ತದೆ.

3. ನಟರ ದೈಹಿಕ ತರಭೇತಿ ನೀಡಲು, ದೈಹಿಕ ನೈಪುಣ್ಯ ಮತ್ಯ ದೈನಂದಿನ ವ್ಯಾಯಾಮಗಳನ್ನು ಸೂಕ್ತವಾದ ದಕ್ಷಿಣ ಭಾರತದ ರಾಜ್ಯದ ಬುಡಕಟ್ಟು ರೂಪಕ ಕಲೆಯಿಂದ ಆಯ್ದುಕೊಳ್ಳಲಾಗಿದೆ.

4. ಬುಡಕಟ್ಟು ಜನಾಂಗದ ಸಂಗೀತದ ರೂಪಕವನ್ನು ಅಭ್ಯಾಸದ ಜೊತೆಗೆ ಗಾಯನ ಕೌಶಲ್ಯವನ್ನು ಬುಡಕಟ್ಟು ಜನಾಂಗದಿಂದ ತೆಗೆದುಕೊಳ್ಳಲಾಗಿದೆ. ಬುಡಕಟ್ಟು ಜನಾಂಗದ ಸಾಹಿತ್ಯದ ಬಗ್ಗೆ ಮತ್ತು ಪಠ್ಯಗಳೂ ಲಭ್ಯವಿದ್ದು, ದಾಖಲೆಗಳನ್ನು ಓದಲು, ವಿಶ್ಲೇಷಿಸುವುದು ಮತ್ತು ಆಳವಾಗಿ ಚರ್ಚಿಸಲಾಗುತ್ತದೆ.

5. ಕ್ರಾಫ್ಟ ಮತ್ತು ವಿನ್ಯಾಸ ಅಂಶಗಳಾದ ಮುಖವಾಡಗಳು, ಶಿರಸ್ತ್ರಾಣಗಳು, ಆಭರಣಗಳು, ಮತ್ತು ವೇಷಭೂಷಣಗಳ ಅಭ್ಯಾಸ ಮಾಡಲಾಗುವದು. ದೃಶ್ಯದ ಕೆಲಸ, ಡಿವೈಸ್ಡ ಪಠ್ಯಗಳನ್ನು ಉಪ-ಸೆಮಿಸ್ಟರ್-1 ರ ಕೊನೆಯಲ್ಲಿ ಪ್ರಸ್ತುತ ಪಡಿಸಲಾಗುವದು.

ಉಪಸೆಮೆಸ್ಟರ್-2

1. ಈ ಉಪ-ಸೆಮಿಸ್ಟರ್ 10 ವಾರಗಳ ಅವದಿಯನ್ನು ಹೊದಿರುತ್ತದೆ.

2. ಈ ಉಪ-ಸೆಮಿಸ್ಟರ್‍ನಲ್ಲಿ ಭಾರತದ ಜಾನಪದ ರಂಗಭೂಮಿಯ ಪರಿಚಯದ ಜೊತೆಗೆ ದಕ್ಷಿಣ ಭಾರತದ ರಾಜ್ಯಗಳ ಪ್ರಾಂತ್ಯಗಳ ಮತ್ತು ದಕ್ಷಿಣ ಭಾಗದ ಜನಪದದ ಬಗ್ಗೆ ಗಮನಹರಿಸುವುದು.

3. ದೈಹಿಕ ವ್ಯಾಯಾಮದ ಕೌಶಲ್ಯಗಳನ್ನು ಆಯಾ ಭಾಗದ ಜನಪದ ಕಲೆಯ ರೂಪಕದಿಂದ ತೆಗೆದುಕೊಳ್ಳಲಾಗಿದೆ

4. ಸ್ಥಳಿಯ ಪುರಾಣ ಭಂಡಾರದಲ್ಲಿ, ಪ್ರದರ್ಶಕ ಆಧಾರಿತ ವಿವರಣಾತ್ಮಕ ಸುಧಾರಣೆ ಮತ್ತು ಪಾತ್ರಕ್ಕೆ ಜೀವ ತುಂಬಿ, ಜೊತೆಗೆ ಅವರ ಶಕ್ತಿ ವ್ಯಕ್ತಪಡಿಸುವದರ ಬಗ್ಗೆ ಗಮನಹರಿಸುವದು.

5. ನಟರ ತರಬೇತಿಗಾಗಿ ಸಂಗೀತ ಮತ್ತು ಗಾಯನ ಕೌಶಲ್ಯದ ವ್ಯಾಯಾಮಕ್ಕೆ ಜನಪದ ಕಲೆ ದಕ್ಷಿಣ ಭಾಗದಿಂದ ಮತು ಸಂಘಟಿತರಿಂದ ಆಯ್ದುಕೊಳ್ಳಲಾಗಿದೆ. ಲಯ, ನಿಲುವು ಮತ್ತು ಚಲನವಲನೆಗಳ ಮಾದರಿಯನ್ನು ಸಹ ಕಲಿಸಲಾಗುವುದು.

6. ಜನಪದ ಮತ್ತು ಜನಪದ ನಾಟಕಗಳ ಪಠ್ಯಗಳನ್ನು ಆಳವಾಗಿ ಓದುವದು, ಚರ್ಚಿಸುವದು,  ವಿಶ್ಲೇಶಿಸಲಾಗುವದು.

7. ಜನಪದ ಆಧಾರಿತ ರಂಗಭೂಮಿಯ ರಂಗಪರಿಕರ ಮತ್ತು ರಂಗವಿನ್ಯಾಸ ಅಂಶಗಳನ್ನು ತಯಾರಿಸುವದು ಮತ್ತು ಆಭ್ಯಾಸ ಮಾಡಲಾಗುವದು. ಹಾಗೂ ಮುಖವರ್ಣನೆ, ಮುಖವಾಡಗಳನ್ನು ಊಪಯೋಗಿಸುವದು , ಸಾಂಕೇತಿಕ ಚಿನ್ಹೆಗಳ ಬಗ್ಗೆ ಓಳಗೊಂಡಿರುತ್ತದೆ.

8. ಜನಪದ ಕಲೆಯ ರೂಪಕ ಆಧಾರಿತ ಕೂರಿತು ದೃಶ್ಯ ಸಂಯೋಜನೆ, ಬರೆದ ಅಥವಾ ನಿಗದಿತ ಪಠ್ಯಗಳನ್ನು ಉಪ-ಸೆಮಿಸ್ಟರ್-2 ರ ಕೊನೆಯಲ್ಲಿ ಪ್ರಸ್ತುತ ಪಡಿಸಲಾಗುವದು.

9. ಸದರಿ ವೈವಾ ಪರೀಕ್ಷೆಯ ನಂತರ 2 ವಾರಗಳ ರಜಾದಿನಗಳನ್ನು ಕೈಗೊಳ್ಳಲಾಗು ವುದು.

ಉಪಸೆಮೆಸ್ಟರ್-3

1. ಈ ಉಪ-ಸೆಮಿಸ್ಟರ್ ನಾಟ್ಯ ಶಾಸ್ತ್ರ ಮತ್ತು ಭಾರತೀಯ ಶಾಸ್ತ್ರೀಯ ರಂಗಭೂಮಿಯ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅಭ್ಯಾಸ ಮಾಡಲು ಮೀಸಲಾಗಿರುತ್ತದೆ.

2. ಈ ಉಪ-ಸೆಮಿಸ್ಟರ್‍ನಲ್ಲಿ ದಶರೂಪಕ ಕುರಿತ ಆಳವಾದ ಅಧ್ಯಯನ ಮತ್ತು ಇನ್ನೆರಡು ರೂಪಕಗಳ ಶಾಸ್ತ್ರೀಯ ಅಂಶಗಳ ಅದ್ಯಯನದ ಜೊತೆಗೆ ವ್ಯಾಖ್ಯಾನಿಸುವದು, ವಿಶ್ಲೇಶಿಸುವುದು ಮುಖ್ಯವಾಗಿರುತ್ತದೆ.

3. ನಾಟ್ಯಶಾಸ್ತ್ರದ ಪ್ರಕಾರ ವಿವಿಧ ಅಭೀನಯ ಪದ್ದತಿಗಳಾದ ಆಂಗೀಕ, ವಾಚಿಕ, ಆಹಾರ ಮತ್ತು ಸಾತ್ವಿಕ ಅಭೀನಯ ಮಾದರಿ ಅರಿಯುವುದು ಮತ್ತು ಹಸ್ತ ಮುದ್ರೆಗಳು ಕ್ರೌಡಿಕರಿಸಿದ ವಿವಿಧ ಭಾವಭಂಗಿಗಳನ್ನು ಪ್ರಾಯೋಗಿಕವಾಗಿ ಕಲಿಯುವುದು ಹಾಗೂ ಅಭ್ಯಸಿಸುವುದು.

4. ಶಾಸ್ತ್ರೀಯ ನೃತ್ಯದ ಚಲನವಲನೆಗಳನ್ನು ತಿಳಿಯುವುದು ಹಾಗೂ ದೈಹಿಕ ಕೌಶಲ್ಯಗಳ ಅಭ್ಯಾಸ.

5. ಸಂಗೀತ ಮತ್ತು ಗಾಯನ ಧ್ವನಿ, ಮಾತಿನ ಕೌಶಲ್ಯ ಕಲಿಕೆಯ ಒಂದು ಭಾಗ.

6. ವಿನ್ಯಾಸ ಅಂಶಗಳು, ಹಲವಾರು ಪ್ರದರ್ಶನದ ರಂಗಸ್ಥಳಗಳೂ, ರಂಗಸಜ್ಜಿಕೆ, ರಂಗಪರಿಕರ, ಪ್ರಸಾಧನಗಳ ಪ್ರಾಯೋಗಿಕ ಅಭ್ಯಾಸ, ಇವುಗಳನ್ನೊಳಗೊಂಡತೆ ನಾಯಕ, ನಾಯಕಿ, ವಿದುಷಕ ಇತ್ಯಾದಿ ಕಲಿಕೆಯು ಈ ಸೆಮೆಸ್ಟರ್‍ನ ಒಂದು ಭಾಗವಾಗಿರುತ್ತದೆ.

7. ರಂಗ ಆಧಾರಿತ ಸಂಸ್ಕøತ ಪಠ್ಯ ದೃಶ್ಯಾವಳಿಗಳನ್ನು ಕಲಿಕೆಯ ಭಾಗವಾಗಿ ಪ್ರಸ್ತುತ ಪಡಿಸಲಾಗುವದು.

ಉಪಸೆಮೆಸ್ಟರ್-4

1. ಆಧುನಿಕ ನಟರನ್ನು ರೂಪಿಸುವ ಸಲುವಾಗಿ ಈವರೆಗೆ ಅಧ್ಯಯನಕ್ಕೆ ಒಳಪಡಿಸಿದ ಬುಡಕಟ್ಟುಕಲೆಗಳು, ಕೀಯಾವಿಧಿ, ರಂಗಕ್ರಿಯೆಗಳು, ಜಾನಪದರಂಗ ಪ್ರಕಾರಗಳು ಭಾರತಿಯ ಶಾಸ್ತ್ರೀಯ ರಂಗಭೂಮಿಯ ಅಂಶಗಳನ್ನೊಳಗೊಂಡತೆ ಕಲ್ಪನೆ, ಪರಿಕಲ್ಪನೆಗಳನ್ನು ಆಧುನಿಕ ನಟರ ತರಬೇತಿಗೆ ಅಳವಡಿಸುವುದಕ್ಕೆ ಮೀಸಲಾಗಿರುತ್ತದೆ.

2. ಮಾನಸಿಕ ಸಮಕಾಲೀನ ವ್ಯಾಯಾಮಗಳು ರಂಗಾಟಗಳ ಮೂಲಕ ನಟನೆ, ವಿಭಿನ್ನ ಕೀಲೂಗಳೂ, ಮಾಸಸಿಕ ಒತ್ತಡ, ವಿಶ್ರಾಂತಿ, ಧ್ಯಾನ ಮತ್ತು ಯೋಗ ಇವುಗಳನ್ನು ಓಳಗೊಂಡಿದೆ.

3. ಸಮಕಾಲೀನ ವ್ಯಾಯಾಮಗಳಿಂದ, ಧ್ವನಿ, ಧ್ವನಿಯ ತಂತು, ಪಿಚ್, ಪರಿಮಾಣ, ಧ್ವನಿ ಏರಿಳಿತ ಇತ್ಯಾದಿಗಳನ್ನು ಓಳಗೊಂಡಿದೆ.

4. ನಟನೆಯ ವಿವಿಧ ವಿಧಾನ ಹಾಗೂ ಪದ್ದತಿಗಳದ್ದು ಮುಖ್ಯವಾಗಿ ಸ್ಟಾನಿಸ್ಲಾವ್ಸ್ಕಿ, ಮೇಯರ್‍ಹೋಲ್ಡ್, ಬ್ರೆಕ್ಟ್ಸ್ ಇತ್ಯಾದಿಗಳ ಪರಿಚಯಿಸುವುದು.

5. ದಕ್ಷಿಣ ಭಾರದತ ರಂಗ ನಾಟಕ ಓದುವಿಕೆ ಅಧ್ಯನಯನದ ಭಾಗವಾಗಿದೆ.

6. ನಾಟಕ ಪ್ರಯೋಗ ಪ್ರದರ್ಶನ ಸಮಕಾಲೀನ ರಂಗಪಠ್ಯ ಆಧಾರಿತವಾಗಿರುತ್ತದೆ.

7. ಈ ಉಪ-ಸೆಮಿಸ್ಟರ್ ಸಾಮಾನ್ಯ ವಾರ್ಷಿಕ ವೈವಾದೊಂದಿಗೆ ಕೊನೆಗೊಳ್ಳುತ್ತದೆ.