ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ
(ಭಾರತ ಸರ್ಕಾರದ ಅಧೀನದಲ್ಲಿರುವ ಸ್ವಾಯಕ್ತ ಸಂಸ್ಥೆ)

about-nsd-bengaluru-centre

ದಕ್ಷಿಣ ಭಾರತಕ್ಕಾಗಿ ಮೀಸಲಾಗಿರುವ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಕಳೆದ ವರ್ಷವಷ್ಟೆ ಒಂದು ರಚನಾತ್ಮಕ ತರಬೆತಿಯನ್ನು ಪ್ರಾರಂಬಿಸಿತು. ಒಂದು ವರ್ಷದ ಕೋರ್ಸ್‍ನ್ನು ಸಾಕಷ್ಟು ಅಧ್ಯಯನದ ನಂತರ ಪ್ರಮುಖವಾಗಿ ದಕ್ಷಿಣ ಭಾರತದ ಪ್ರದರ್ಶನ ಕಲಾ ಪ್ರಕಾರಗಳನ್ನು ಹಾಗು ಇತರೆ ವಿವಿಧ ತರಬೇತು ಮಾದರಿಗಳನ್ನು ಆಧರಿಸಿ ರೂಪಿಸಲಾಗಿದೆ. ಆ ಕೋರ್ಸ್‍ನ ಪರಿಕಲ್ಪನೆನ್ನು ರಂಗಭೂಮಿಯ ಹೊಸ ತಲೆಮಾರಿನ ದಿಗ್ಗಜರನ್ನು ರೂಪಿಸುವ ದೃಷ್ಟಿಯಿಂದ ರೂಪಿಸಲಾಗಿದೆ. ಆ ಒಂದು ವರ್ಷದ ತರಬೇತಿ ವಿದ್ಯಾರ್ಥಿಗಳನ್ನು ಯಾವುದೆ ಒಂದು ಬಗೆಯ ಶೈಲಿ ಅಥವಾ ಪ್ರಕಾರಕ್ಕಷ್ಟೇ ಸೀಮಿತವಾಗದೆ ಹಲವು ಪ್ರಕಾರಗಳ ಹಾಗು ಸಧೃಢವದ ವಿಧಾನಗಳ ಮೂಲಕ ರಂಗಭೂಮಿಯ ಅಂತರಾಷ್ಟೀಯ ಮಟ್ಟದ ಅಗತ್ಯಕ್ಕೆ ಸ್ಪಂದಿಸುವ ಸಾಮಥ್ರ್ಯವನ್ನು ಒದಗಿಸಲು ಸಹಾಯಕಾರಿಯಾಗಲಿದೆ. ವಿವಿಧ ಪ್ರಕಾರಗಳು, ತಙ್ಞರುಗಳು, ಅಬಿಙ್ಞರುಗಳ ನಡುವೆ ಅಂತರ ಸಾಂಸ್ಕøತಿಕ ಸಂವಾದಗಳನ್ನು ನಡೆಸುವಲ್ಲಿ ರಾಷ್ಟ್ರೀಯ ಶಾಲೆಯೂ ಬದ್ಧವಾಗಿದೆ.

ಶಾಸ್ತ್ರೀಯ ಜಾನಪದ ಹಾಗು ಬುಡಕಟ್ಟು ಜನಾಂಗಗಳ ಪ್ರದರ್ಶನ ಕಲಾ ಪ್ರಕಾರಗಳ, ಸಂಗೀತ, ಕುಣಿತ, ಸಾಹಸಕಲೆಗಳು, ಹಲವು ವಾದ್ಯಾಗಳನ್ನು ನುದಿಸುವ ಸಾಮಥ್ರ್ಯಗನ್ನಾಧರಿಸಿ ಆಧುನಿಕ ನಟನನ್ನು ತಯಾರಿಗೊಳಿಸುವುದು ಈ ತರಬೇತಿಯ ಉದ್ದೇಶ. ಭಾರತದಲ್ಲಿ ಒಬ್ಬ ಸರ್ವತೋಮುಖ ನಟನನ್ನು ಸೃಷ್ಟಿಸುವ ದೃಷ್ಟಿಯಿಂದ ಈ ತರಬೇತಿಯು ಪ್ರಮುಖವಾಗಿದೆ. ಆಧುನಿಕ ಹಾಗು ಸಮಕಾಲೀನ ಪಾಶ್ಚಿಮಾತ್ಯ ತರಬೇತು ಮಾದರಿಗಳೊಂದಿಗೆ ನಮ್ಮದೇ ಆದ ಸಾಂಪ್ರದಾಯಿಕ ಕಲಿಕೆಯ ವಿಧಾನಗಳನ್ನು ಬಳಸುವುದು ನಮ್ಮ ಯೋಜನೆಯಾಗಿದೆ. ಈ ತರಬೇತಿ ಭಾರತದ ಹಾಗು ಜಾಗತಿಕ ಭವಿಷ್ಯದ ರಂಗಭೂಮಿಗೆ ಒಂದು ಉತ್ತಮ ಕೊಡುಗೆ.

about-nsd-bottom-1
about-nsd-bottom-3
about-bengaluru-bottom-3