ರಾಷ್ಟ್ರೀಯ ನಾಟಕ ಶಾಲೆ, ನವದೆಹಲಿ
(ಭಾರತ ಸರ್ಕಾರದ ಅಧೀನದಲ್ಲಿರುವ ಸ್ವಾಯಕ್ತ ಸಂಸ್ಥೆ)

about-new-delhi

ರಾಷ್ಟ್ರೀಯ ತರಬೇತಿ ನಾಟಕ ಶಾಲೆ ಭಾರತದ ಅಗ್ರಗಣ್ಯ ಸಾಂಸ್ಕøತಿಕ ಸಂಸ್ಥೆಯಾಗಿದೆ. 1959 ರ ಎಪ್ರೀಲ್ ರಂದು ಭಾರತ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಅಧೀನದಲ್ಲಿ ಸ್ಥಾಪನೆಯಾಯಿತು. ವರ್ಷಕಳಿಯುತ್ತಿದ್ದಂತೆ ವೇಗಗತಿಯಲ್ಲಿ ದೇಶದೆಲ್ಲಡೆ ತನ್ನ ಚಟುವಟಿಕೆಗಳನ್ನ ವ್ಯಾಪಿಸಿದೆ. ಮತ್ತು ಈ ಸಂಸ್ಥೆಯು ಹೆಸರಾಂತ ನಟರನ್ನು, ನಿರ್ದೇಶಕರನ್ನು, ರಚನೆಕಾರರನ್ನು, ಸಂಗೀತಗಾರರು, ತಂತ್ರಙ್ಞರನ್ನು, ಚಿತ್ರಮಂದಿರದಲ್ಲಿ ಕೆಲಸ ಮಾಡುವವರನ್ನು ಕೊಡಿಗೆಯಾಗಿ ನೀಡಿದೆ. ಮತ್ತು ದೂರದರ್ಶನದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸುರುವಾಸಿಯಾಗಿದೆ.

ಶಾಲೆಯು ಎರಡು ರೀತಿಯಾದ ಪ್ರದರ್ಶನ ನೀಡುತ್ತದೆ, ಮೊದಲನೆಯದು ರೆಪರ್ಟಿ ಕಂಪೆನಿ ಮತ್ತು ಥೆಟರ್-ಇನ್-ಎಜ್ಯೂಕೆಶನ ಕಂಪೆನಿ (ಸಂಸ್ಕಾರ ರಂಗ ಟೋಲಿ). ವಿವಿಧ ಭಾಷೆಗಳಲ್ಲು ನಾಟಕಗಳ ಪ್ರತಿಗಳನ್ನು ಪ್ರಕಟಗೊಳಿಸುತ್ತದೆ.

ಶಾಸ್ತ್ರೀಯ ಜಾನಪದ ಹಾಗು ಬುಡಕಟ್ಟು ಜನಾಂಗಗಳ ಪ್ರದರ್ಶನ ಕಲಾ ಪ್ರಕಾರಗಳ, ಸಂಗೀತ, ಕುಣಿತ, ಸಾಹಸಕಲೆಗಳು, ಹಲವು ವಾದ್ಯಗಳನ್ನು ನುಡಿಸುವ ಸಾಮರ್ಥ್ಯಗಳನ್ನಾಧರಿಸಿ ಆಧುನಿಕ ನಟನನ್ನು ತಯಾರಿಗೊಳಿಸುವುದು ಈ ತರಬೇತಿಯ ಉದ್ದೇಶ. ಭಾರತದಲ್ಲಿ ಒಬ್ಬ ಸರ್ವತೋಮುಖ ನಟನನ್ನು ಸೃಷ್ಟಿಸುವ ದೃಷ್ಟಿಯಿಂದ ಈ ತರಬೇತಿಯು ಪ್ರಮುಖವಾಗಿದೆ. ಆಧುನಿಕ ಹಾಗು ಸಮಕಾಲೀನ ಪಾಶ್ಚಿಮಾತ್ಯ ತರಬೇತು ಮಾದರಿಗಳೊಂದಿಗೆ ನಮ್ಮದೇ ಆದ ಸಾಂಪ್ರದಾಯಿಕ ಕಲಿಕೆಯ ವಿಧಾನಗಳನ್ನು ಬಳಸುವುದು ನಮ್ಮ ಯೋಜನೆಯಾಗಿದೆ. ಈ ತರಬೇತಿ ಭಾರತದ ಹಾಗು ಜಾಗತಿಕ ಭವಿಷ್ಯದ ರಂಗಭೂಮಿಗೆ ಒಂದು ಉತ್ತಮ ಕೊಡುಗೆ.

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ, ನವದೆಹಲಿ ಹೊರಗಡೆ ಇನ್ನೊಂದು ರಾಷ್ಟ್ರೀಯ ನಾಟಕಶಾಲೆಯೊಂದನ್ನು ಆರಂಭಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಬೆಳೆಯುತ್ತಿದ್ದ ರಂಗತರಬೇತಿಯ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಕನಸಿನ ಕಾರ್ಯವು ಕಲಾಗ್ರಾಮದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರಕ್ಕಾಗಿ ಕರ್ನಾಟಕ ಸರ್ಕಾರವು ಮೂರು ಎಕರೆ ಜಮೀನನ್ನು ಮಂಜೂರು ಮಾಡುವುದರ ಮೂಲಕ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಮ್ಮಿಶ್ರ ಸಹಯೋಗದೊಂದಿಗೆ ರೂಪಿಸಿರುವ ಹೊಸ ಬೆಂಗಳೂರು ಕೇಂದ್ರವು ಅಭೂತಪೂರ್ವ ಆವರಣದಲ್ಲಿ ಸುಸಜ್ಜಿತ ಕೊಠಡಿ ಹಾಗು ಪ್ರದರ್ಶನಕ್ಕಾಗಿ ವಿವಿಧ ಬಗೆಯ ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿದ ಸ್ಥಳಗಳೊಂದಿಗೆ ನಿರ್ಮಾಣವಾಗಲಿದೆ. ಬೆಂಗಳೂರು ಕೇಂದ್ರವು ದೆಹಲಿಯಲ್ಲಿ ಈಗಾಗಲೇ ಕಳೆದ 50 ವರ್ಷಗಳಿಂದ ಸಿದ್ಧಗೊಂಡಿರುವ ದೆಹಲಿಯಲ್ಲಿ ಮಾದರಿಯಲ್ಲಿಯೇ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವದು.

ಒಚಿದು ರೆಪರ್ಟರಿ ಕಂಪೆನಿ, ಶಿಕ್ಷಣದಲ್ಲಿ ರಂಗಭೂಮಿ ಕಂಪೆನಿ, ದಕ್ಷಿಣ ಭಾಗಗಳಿಗಾಗಿ ವಿಸ್ತಾರಣಾ ಕಾರ್ಯಕ್ರಮಗಳು, ದಕ್ಷಿಣದ ಭಾಷೆಗಳಲ್ಲಿ ಭಾಷಾಂತರ ಮತ್ತು ಹೊಸ ಕೃತಿಗಳಿಗಾಗಿ ಪ್ರಕಟಣಾ ವಿಭಾಗ, ಸಂಗ್ರಹ ಮತ್ತು ದಾಖಲಾತಿ ವಿಭಾಗ ಹೀಗೆ ಹಲವಾರು ಹೊಸ ಆಯಾಮಗಳನ್ನು ಮುಂಬರುವ ವರ್ಷಗಳಲ್ಲಿ ಸೇರ್ಪಡಿಸುವುದರ ಮೂಲಕ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವನ್ನು ಇನ್ನಷ್ಟು ಕ್ರಿಯಾಶೀಲ ಸಂಸ್ಥೆಯನ್ನಾಗಿ ಕಟ್ಟಲಾಗಿದೆ.

ಪ್ರಾದೇಶಿಕ ನಾಟಕ ಶಾಲೆಗಳನ್ನು ಸ್ಥಾಪಿಸಲು ಏನ್.ಏಸ್.ಡಿ ಕಾರ್ಯಕ್ರಮದ ಭಾಗವಾಗಿ, ಪ್ರಾಧೇಶಿಕ ಸಂಪನ್ಮೂಲ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸನಲ್ಲಿ ಸ್ವತಂತ್ರ ನಿರ್ಮಾಣ ಬಾಕಿ, ಪೂರ್ಣ ಪ್ರಮಾಣದ ಪ್ರಾಧೇಶಿಕ  ನಾಟಕ ಶಾಲೆಯನ್ನು ನವೀಕರಿಸಲಾಗಿದೆ. ಸದ್ಯ, ಅದು ದಕ್ಷಿಣದ ರಾಜ್ಯಗಳ (ಕರ್ನಾಟಕ, ಸೀಮಾಂದ್ರ ತೆಲಂಗಾಣ, ತಮಿಳುನಾಡು, ಕೇರಳ, ಮತ್ತು ಪಾಂಡಿಚೇರಿಯ ಕೇಂದ್ರಾಡಳೀತ ಪ್ರದೇಶಗಳೂ ಮತ್ತು ಲಕ್ಷದ್ವೀಪದ ) ನಾಡಕ ಕಾರ್ಮಿಕರ ಅನುಕೂಲಕ್ಕಾಗಿ ರಂಗಭೂಮಿ ಕಾರ್ಯಾಗಾರಗಳನ್ನು ನೆಡೆಸುತ್ತಿದೆ.

about-nsd-bottom-1
about-nsd-bottom-3
about-bengaluru-bottom-3