ನಾಟಕ

 ನಾಟಕ ಕುರಿತು

ಪಿ.ಲಂಕೇಶ್‍ರ ಗುಣಮುಖ 17 ನೇ ಶತಮಾನದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಪರ್ಷಿಯಾದ ನಾದಿರ್ ಶಾ ನ ಚಾರಿತ್ರಿಕ ಅಂಶಗಳನ್ನೂಳಗೂಂಡು ರಚನೆಯಾದ ಐತಿಹಾಸಿಕ ನಾಟಕ. ಪರ್ಷಿಯಾದ ಸಾಮ್ರಾಟನಾಗಿದ್ದ ನಾದಿರ್ ಶಾ ಬದುಕಿನ ಅವಧಿ ಕೇವಲ 60 ವರ್ಷಗಳು (1688-1747). 1739ರಲ್ಲಿಬಾರತಕ್ಕೆ ದಂಡೆತ್ತಿ ಬಂದು 1740ರಲ್ಲಿ ಕರ್ನಾಲ್‍ಲ್ಲಿ ಮೊಗಲ್ ದೊರೆಯ ಬಲಾಢ್ಯ ಸೈನ್ಯವನ್ನು ಮಣಿಸಿ ದೆಹಲಿ ವಶಪಡಿಸಿಕೊಳ್ಳುತ್ತಾನೆ. ಭಾರತಕ್ಕೆ ಬರುವ ಮುನ್ನ ನಾದಿರ್ ಶಾ ತನ್ನ ದಂಗಕೋರ ಹಾಗು ಲೂಟಿಮಾಡುವ ಆಕ್ರಮಣಕಾರಿ ಪ್ರವೃತ್ತಿಯಿಂದ ವೈರಿಗಳಿಗೂ ಭೀತಿ ಹುಟ್ಟಿಸಿರುತ್ತಾನೆ. ಈ ಆಕ್ರಮಣಕಾರಿ ಪ್ರವೃತ್ತಿಯೇ ಅವನನ್ನು ಇರಾನ್ ಪರ್ಷಿಯನ್ ಸಾಮ್ರಾಟನಾಗುವಲ್ಲಿಗೆ ಬಂದು ನಿಲ್ಲುತ್ತದೆ.

ದೆಹಲಿಯನ್ನು ವಶಪಡಿಕೊಂಡ ನಂತರ ಶಾ ನ ಅಂತರಂಗದ ತೊಳಲಾಟಗಳು ಇಲ್ಲೆ ಆರಂಭವಾಗುತ್ತವೆ, ನೆಲೆನಿಲ್ಲುವುದೋ ತನ್ನ ದೇಶಕ್ಕೆ ಹಿಂತಿರುಗುವದೋ ಎಂಬ ಗೊಂದಲಗಳಲ್ಲಿ ಮುಳುಗಿ ಹೋಗಿ ಗೆಲ್ಲುವ ಛಲದಿಂದ ಕ್ರೂರಿಯಾಗುತ್ತಾ ಹೋಗುತ್ತಾನೆ. ಅಂದಿನ ಭಾರತದಲ್ಲಿದ್ದ ಆಡಳಿತದ ಭ್ರಷ್ಟಚಾರ ಅವನನ್ನು ಮತ್ತಷ್ಟು ಕ್ರೂರಿಯನ್ನಾಗಿಸುತ್ತದೆ. ಆ ವಾತಾವರಣದಲ್ಲಿ ನಾದಿರ್ ಆಂತರಿಕವಾಗಿ ಮತ್ತು ಬಹಿರಂಗವಾಗಿ ಸೆಣೆಸುವುದೇ ಈ ನಾಟಕದ ಮೂಲ ಕಥೆ.

ಮೊಗಲ್ ಕಾಲದ ರೋಗಗ್ರಸ್ಥ ಆಡಳಿತ ಶಾಹಿ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡುವುದನ್ನು ಕಂಡ ನಾದಿರ್ ರೋಸಿಹೋಗಿ ಹಿಂಸೆ, ಹತ್ಯೆಯೇ ಈ ಭ್ರಷ್ಟತೆಯನ್ನು ಹತ್ತಿಕ್ಕುವ ಮದ್ದು, ಕೊಲ್ಲುವುದೆ ತಕ್ಕಸಾಸ್ತಿ ಎಂಬ ನಿರ್ಧಾರಕ್ಕೆ ಬಂದು ಜನರನ್ನು ಕೊಲ್ಲುತ್ತಾ ಭರ್ಭರ ಪಶುವಾಗುತ್ತಾನೆ!.

ಎದುರಾಳಿಗಳನ್ನು ಕೊಲ್ಲುವುದರಲ್ಲೆ ವಿಕೃತ ತೃಪ್ತಿ ಹೊಂದುತ್ತಿದೆ ನಾದಿರ್ ಒಬ್ಬ ರೂಡಿಗತನಾದ ಆಕ್ರಮಣಕಾರಿ. ಆಕ್ರಮಣ ಮತ್ತು ಯುದ್ಧ ತಂತ್ರಗಳಲ್ಲಿ ಅವನು ಯಾವಾಗಲೂ ಜಯಶಾಲಿ. ಆ ಜಯಶೀಲತೆಯೇ ಅವನ ಕ್ರೌರ್ಯ ಪ್ರದರ್ಶನಕ್ಕೆ ಪೂರಕವಾಗಿದ್ದವು. ಪ್ರತಿ ಆಕ್ರಮಣದಲ್ಲೂ ದೋಚಿದ ಸಂಪತ್ತು ಮತ್ತು ವಿಕೃತ ತೃಪ್ತಿ. ನೆಮ್ಮದಿ ಅವನನ್ನು ಕ್ರೂರಿಯಾಗಿಸುವಲ್ಲಿ ಸಹಕಾರಿಯಾಗುತ್ತಾ ಹೋಯಿತು.

ತನ್ನ ಕ್ರೌರ್ಯಕ್ಕೆ ಉತ್ತೇಜಿತನಾಗುತ್ತಿದ್ದ ನಾದಿರ್ ಆಡಳಿತ ಸುಧಾರಣೆಗೆ ಹಿಂಸೆಯ ಮಾರ್ಗ ಹಿಡಿದು ಅಧಃಪತನ ಕಮಡವನು, ಮಯೂರ ಸಿಂಹಾಸನ, ಕೊಯಿನುರು ವಜ್ರ ವಶಪಡಿಸಿಕೊಳ್ಳಲು ಬಂದವನು ರೋಗಿಪೀಡಿತನಾಗಿ ಮೊಗಲ್ ಕಾಲದ ಸೂಫಿ ಹಕೀಮ ಅಲಾವಿಖಾನ್ ಮೂಲಕ ರೋಗ ಗುಣಪಡಿಸಿಕೊಳ್ಳುವ ಸುತ್ತ ಹೆಣೆದುಕೊಂಡಿರುವ ಈ ನಾಟಕ. ವರ್ತಮಾನದ ಧರ್ಮ ಮತ್ತು ರಾಜಕೀಯ ಜೊತೆಗೂಡಿದಾಗ ಹುಟ್ಟುವ ಹಿಂಸೆ, ಕ್ರೌರ್ಯ ಕುರಿತು ಚರ್ಚಿಸುತ್ತದೆ. ಜಗತ್ತಿನಾದ್ಯಾಂತ ಭಯೋತ್ಪಾದನೆ, ಕೋಮುವಾದ, ರಾಜಕೀಯ ಬಲಗೊಳ್ಳುತ್ತಿರುವ ಸಮಕಾಲಿನ ಚಿತ್ರಣವನ್ನು ಚಿತ್ರಿಸುತ್ತದೆ. ಆಡಳಿತಗಾರರು ಕಣ್ಣು ಕಿವಿ ಕಳೆದುಕೊಂಡು ಹೃದಯ ಹೀನರಾದರೆ ನಾದಿರ್ ಶಾನ ರೋಗದ ವೈರಾಣುಗಳು ವರ್ತಮಾನಕಾಲದಲ್ಲೂ ಹರಡುತ್ತಿರುವುದರ ಚಿತ್ರಿಣವನ್ನು ಗುಣಮುಖ ನಾಟಕದಲ್ಲಿ ಕಾಣಬಹುದು.

ತುಳುವನಾಡ ಸಿರಿ

ಕರ್ನಾಟಕದ ಜನಪದ ಕಾವ್ಯಗಳಲ್ಲಿ ಸಿರಿ ಮಹಾಕಾವ್ಯಕ್ಕೆ ಮಹತ್ತರವಾದ ಸ್ಥಾನವಿದೆ. ಭೂತಾರಾಧನೆಗೆ ಪ್ರಸಿದ್ಧಿ ಪಡೆದ ತುಳುನಾಡಿನಲ್ಲಿ ಸಿರಿ ಎಂಬ ಮಹಾತಾಯಿಗೆ ಆಕೆಯದ್ದೇ ಆದ ಐತಿಹ್ಯವಿದೆ. ಸತ್ಯನಾಪುರದಲ್ಲಿ ಸತ್ಯದ ಮಗಳಾಗಿ ಬಿರ್ಮಾಳ್ವರ ಮೊಮ್ಮಗಳಾಗಿ ಹುಟ್ಟಿದ ಸಿರಿಯು ಬಸ್ರೂರು ಬತ್ತಕೇರಿಯ ಕಾಂತುಪೂಂಜರ ಮಡದಿಯಾಗುತ್ತಾಳೆ. ಕೆಟ್ಟ ಗಂಡನೊಂದಿಗೆ ಬದುಕಬೇಕಾದ ಸ್ಥಿತಿ ಒದಗಿಬರುತ್ತದೆ.

ಬಿರ್ಮಾಳ್ವರು ತೀರದ ಬಳಿಕ ಸತ್ಯನಾಪುರವನ್ನು ವಶಕ್ಕೆ ತೆಗೆದುಕೊಳ್ಳಲು ಕೂಟದ ಕಳ್ಳಕ್ಕೆ ಕಾಂತಪೂಂಜರಿಂದ ಸಿರಿ ವಾದಿಸಿ ವಿಚ್ಛೇದನ ಪಡೆದುಕೊಳ್ಳುತ್ತಾಳೆ. ವಿಚ್ಛೇದನ ಪಡೆದ ಹೆಣ್ಣಿಗೆ ಮರುಮದುವೆ ಆಗುವ ಸ್ವಾತಂತ್ರ್ಯ ಪಡೆದುಕೊಂಡ ಪ್ರಥಮ ಮಹಿಳೆಯಾಗಿಯೂ ಸಿರಿ ಕಾಣಿಸಿಕೊಳ್ಳುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಸಮಾನತೆಗಾಗಿ ಹೆಣಗಾಡಿ ಜಯಸಾಧಿಸಿದ ಸಿರಿ ತುಳುವರ ಆರಾಧ್ಯ ದೈವವಾಗಿ ಇಂದಿಗೂ ಜನಾದರಣೆಗೆ ಪಾತ್ರಳಾಗಿದ್ದಾಳೆ.

ದಕ್ಷಿಣ ಕನ್ನಡದ ಮೂರು ಪ್ರಮುಖಕೇಂದ್ರಗಳಲ್ಲಿ ಇಂದಿಗೂ ಸಿರಿ ಜಾತ್ರೆ ಪ್ರಚಲಿತವಿದೆ. ಸಂಸಾರದಲ್ಲಿ ನೋವುಂಡ ಅನೇಕ ಹೆಣ್ಣುಮಕ್ಕಳು ಜಾತ್ರೆಯ ಸಮಯದಲ್ಲಿ ಮೈಮೇಲೆ ಬಂದವರಾಗಿ, ಬಳಿಕ ತಮ್ಮೊಳಗಿನ ಗಾಯಗಳನ್ನು ವಾಸಿಮಾಡಿಕೊಳ್ಳುವ ಅಪೂರ್ವ ವಿದ್ಯಮಾನ ಸಿರಿ ಜಾತ್ರೆಯಲ್ಲಿ ನಡೆಯುತ್ತದೆ.

ವಿವಾಹಿತ ಹೆಣ್ಣುಮಕ್ಕಳಿಗೆ ಸಮಾನ ಸ್ಥಾನಮಾನ ಸಿಗಬೇಕೆಂದು ಹೋರಾಟ ನೆಡಿಸಿದವಳು ಮಾತ್ರವಲ್ಲದೆ, ಒಂದುವೇಳೆ ಗಂಡಸು ಎರಡನೆಯ ಮದುವೆ ಮಾಡುವ ಸಂದರ್ಭ ಒದಗಿದರೆ ಅದು ಮೊದಲನೆಯ ಹೆಂಡತಿಯ ಅನುಮತಿಯೊಂದಿಗೆ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಆ ಕಾಲದಲ್ಲಿಯೇ ಸಿರಿ ಸಾರಿದ್ದಾಳೆ ಎಂಬುದು ಬಹಳ ಮಹತ್ವದ ವಿಚಾರ.

ಪ್ರಸ್ತುತ ನಾಟಕದಲ್ಲಿ ಅಂದಿನ ನಂಬಿಕೆಗಳ ಮಹಾಪೂರವಿದೆ. ಸತ್ಯದ ಮೂಲಕ ನಡೆಯುವ ಪವಾಡಗಳೂ ಇವೆ. ದೈವಗಳ ಮೇಲಿನ ನಂಬಿಕೆಗೂ ಮಹತ್ತರ ಸ್ಥಾನವಿದೆ. ನಿಷ್ಕಳಂಕ ಬದುಕನ್ನು ಕಟ್ಟಿಕೊಳ್ಳುವ ಕುರಿತ ಎಚ್ಛರಿಕೆಯಿದೆ. ಹೀಗಾಗಿ ಯಾವ ಕಾಲಕ್ಕೂ ಪ್ರಸ್ತುತವೆನಿಸಬಲ್ಲ ಸಿರಿಮಹಾಕಾವ್ಯದ ಮೂಲ ಸತ್ವವನ್ನು ಹೀರಿ ಗೀತಾತ್ಮಕತೆ, ಸಂಖರ್ಷ. ಸಂಭಾಷಣೆಗಳ ಮೂಲಕ ಅದಕ್ಕೆ ನಾಟಕೀಯ ಮೌಲ್ಯವನ್ನು ಪೋಣಿಸಿ ಪ್ರಸ್ತುತ ಸಿರಿಯನ್ನು ಬೆಳಗಿಸಲಾಗಿದೆ.

ಮಾರೀಚನ ಬಂಧುಗಳು

ನಮ್ಮ ಬದುಕಿನಲ್ಲಿ ವಿಸ್ಮಯಗಳು, ಸಮಸ್ಯಗಳು, ಅನುಮಾನಗಳು ಮತ್ತೆ ಮತ್ತೆ ನಮ್ಮನ್ನು ತಿವಿಯುತ್ತಲೇ ಇರುತ್ತೆದೆ. ಇವು ಅನಾದಿಕಾಲದಿಂದಲೂ ಎಲ್ಲರನ್ನೂ ಕಾಡುತ್ತಲೆ ಇದೆ. ಈ ಕಾಲದ ಕಥೆಗಲನ್ನು ಮುಂದಿನ ಕಾಲದ ಉಪಾಯಗಳು ಎಂದು ತತ್ವಙÁ್ಞನಿಗಳು ಹೇಳಿದ್ದಾರೆ. ಸಮಸ್ಯಗನ್ನು ಇಂದು ಎದಾಂದರೆ ಸಮಾಧಾನಗಳನ್ನು ನಾಳೆ ಎಂದು ಕರೆಯುವ ಈ ತತ್ವಙÁ್ಞನಿಗಳು À ಗೊಂದಲ ಹುಟ್ಟಿಸುವ ಸಿದ್ಧಾಂತಗಳು ಅನೂಚಾನವಾಗಿ ಎಲ್ಲ ಕಾಲಗಳಲ್ಲಿಯೂ ನೆಡೆದುಬಂದಿದೆ. ಕಥೆಗಳಲ್ಲಿ ಪ್ರತಿಪಾದಿಸಲಾಗುವ ಎಲ್ಲ ಸಾಮಾಜಿಕನೀತಿಗಳನ್ನು ಸಾರ್ವಕಾಲಿಕ ಮೌಲ್ಯಗಳೆಂದೇ ಬಿಂಬಿಸುವುದು ಪಾರಂಪರಿಕ ಮೌಲ್ಯಗಳ ಆರಾಧಕ ನಿರಂತರ ಚಾಳಿಯೇ ಆಗಿಬಿಟ್ಟಿದೆ. ಯಾವುದೇ ಕಾಲದ ಕಥೆಗಳು ಬದುಕನ್ನು ನೆನಪಿಸುತ್ತೆವೆ. ಪುರಾಣಯುಗ, ಇತಿಹಾಸದಕಾಲ, ನವೀನಕಾಲಘಟ್ಟಗಳು ತೆರೆದಿಡುವ ಕಾಣ್ಕೆಗಳು ಗಮನಾರ್ಹವಾಗಿವೆ ನಿಜ, ಆದರೆ ಕಾಲದಒರೆಗೆ ಹಚ್ಚಿದರೆ, ಬದಲಾದ ಮಾಪನಗಳ ಪರೀಕ್ಷೆಯೊಳಗೆ ಮೌಲ್ಯಗಳು ಅಸ್ತಿತ್ವವನ್ನು ಕಳೆದುಕೊಂಡಿರಲು ಸಾಧ್ಯ ಎಬುಂದು ಜಾಣ ನಡೆ.

ನಂತರದ ಕಾಲಗಲಳಲ್ಲಿ ಅದರ ಹಿಂದಿನಕಾಲದ ಕಥೆಗಳಲ್ಲಿನ ತರ್ಕ ನ್ಯಾಯ ಹಾಗು ಸಾದ್ಯತೆಗಳನ್ನು ಪ್ರಶ್ನಿಸುವ, ಒರೆಹಚ್ಚುವ ಕೆಲಸಗಳು ಸಾಮಾಜಿಕನೀತಿಯ ಮೌಲ್ಯಮಾಪನವನ್ನು ಮಾಡುತ್ತಿರುತ್ತವೆ. 1970 ದಶಕದಲ್ಲಿ ಬರೆಯಲಾದ ಅರುಣ್ ಮಹೋಪಾಧ್ಯಾಯ ಅವರ (ಕನ್ನಡಾನುವಾದ-ಬಿಂಡಿಗನವಿಲೆ ನಾರಾಯಣಸ್ವಾಮಿ ) ನಾಟಕ ಮಾರೀಚನ ಬಂಧುಗಳು ಪುರಾಣದ ಕಥೆಯೊಂದನದನು ಆಧುನಿಕ ಮಾಪನಗಳಿಂದ ಮೌಲ್ಯವನ್ನು ನಿಗದಿಪಡಿಸಲು ಪ್ರಯತ್ನಿಸುತ್ತದೆ. ಈ ನಾಟಕದ ಹೆಚ್ಚಳಿಕೆ ಎಂದರೆ, ಪುರಾಣದ ಕಥೆಯೊಂದಕ್ಕೆ ಸಮಾನಾಂತರವಾಗಿ ಆಧುನಿಕ ಕಾಲದ ಎರದು ಸಮಾನಾಂತರ ಕಥೆಗಳನ್ನು ತೆಗೆದುಕೊಂಡು ತೂಗಿ ನೋಡಿ, ಮನುಕುಲದ ನೈತಿಕತೆ ಹಾಗು ಬದುಕುವ ಮೌಲ್ಯಗಳು ತಿರುಗಿ ನೋಡಬೇಕಾದ ದಿಕ್ಕುಗಳನ್ನು ಗುರುತಿಸತೊಡಗುತ್ತದೆ.

ನಾಟಕದಲ್ಲಿ ಶೋಷಣೆಗೊಳಪಡುವ ಪಾತ್ರಗಳಾದ ರಾಮಾಯಣಕಾಲದ ಮಾರೀಚ. ಆಧುನಿಕ ಕಾಲದಲ್ಲಿನ ಭಾರತದ ರೈತ ಈಶ್ವರ,ಹಾಗು ಅಮೆರಿಕದ ಗ್ರೆಗೊರಿ, ಈ ಮೂವರು ತಮ್ಮ ತಮ್ಮ ಕಾಲ ದೇಶಮತ್ತು ಸಂದರ್ಭಗಳನ್ನು ಎದುರಿಸುವಲ್ಲಿ ಎದುರಾಗುವ ನೈತಿಕ ಹಾಗು ಮೌಲ್ಯಗಳನ್ನು ಪ್ರಶ್ನಿಸಿ ಪ್ರೇಕ್ಷಕರಲ್ಲಿ ಗೊಂದಲವನ್ನು ಹೆಣೆಯುತ್ತಾರೆ. ಪಾತ್ರಗಳು ಪಾರಂಪರಿಕ ಮಾದರಿಯನ್ನುಸರಿಸದೇ ಬಂಡಾಯ ಹೂಡಿ ಸಂಭಾಷಣೆಗಳ ದಿಕ್ಕನ್ನು ಬದಲಿಸಿದಾಗ ಸಾಧ್ಯವಾಗುವ ಸಾಮಾಜಿಕನೀತಿಯ ಮೌಲ್ಯಮಾಪನ ಏನಾಗುತ್ತದೆ ಎಬುಂದರತ್ತ ಪ್ರೇಕ್ಷಕರನ್ನು ಸೆಳೆಯುವ, ಚಿಂತಿಸುವಂತೆ ಪ್ರೇರೇಪಿಸುವ ಅಯಸ್ಕಾಂvಗುಣವನ್ನು ಈ ನಾಟಕ ಹೊಂದಿದೆ. ರಾವಣ, ಜಮೀನ್ದಾರ ಹಾಗು ಅಮೆರಿಕದ ಮುಖ್ಯ ಕಾರ್ಯದರ್ಶಿ ವಿಲಿಯಂಸ್ ಅವರುಗಳು ಎಲ್ಲಕಾಲದ ಸಮಾನಾಂತರ ಪಾತ್ರಗಳು ಶೋಷಣೆಯನ್ನು ಮಾಡುತ್ತಲೇ ಬಂದವರು. ಇವರುಗಳಿಗೆ ಒತ್ತಾಸೆಯಾಗಿ ಸ್ವಾರ್ಥಕ್ಕಾಗಿ ವ್ಯವಸ್ಥೆಯೊದಿಗೆ ಕೈಜೋಡಿಸಿ ಶೋಷಣೆಮಾಡುವ ಇನ್ನೊಂದು ಮಾದರಿಯಾಗಿ ಕಾಲನೇಮಿ, ಕರಣಿಕ, ಹಾಗು ಮ್ಯಾಕಿ ಅವರುಗಳು ಸಮಯಸಾಧರುಗಳು ಎಲ್ಲ ಕಾಲಗಳನ್ನೂ ಆಳುತ್ತಲಿರುತ್ತಾರೆ ಎಂಬ ಕಠೋರಸತ್ಯವನ್ನು ಅನಾವರಣಮಾಡುತ್ತದೆ.

ಮೊನಚಾದ ಸಂಬಾಷಣೆಗಳು ಎದುರುಬದುರಾಗುವ ಗೊಂದಲದ ಸನ್ನಿವೇಶಗಳು, ಎಲ್ಲವನ್ನು ಸಮಸ್ಥಿತಿಯರಿಸಲು ಹೆಣಗಾಡುವ ಉಸ್ತಾದ ಮತ್ತು ಅವನ ಚೇಲಾಗಳು ನಾಟಕವನ್ನು ಕಟ್ಟುವ ರೀತಿ ಭೌದ್ಧಿಕ ರಂಜನೆಯ ಮಾದರಿಯದ್ದಾಗಿದೆ. ಪ್ರೇಕ್ಷಕರಲ್ಲಿ ಅತ್ಯಾಸಕ್ತಿಯನ್ನು ತುಂಬಿ ಸಾಮಾಜಿಕ ನ್ಯಾಯದ ಮೌಲ್ಯಮಾಪನವನ್ನು ಕುರಿತು ಚಿಂತಿಸುವಂತೆ ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲಾ.