In ನೋಟೀಸ್, ಮುಖ್ಯಾಂಶಗಳು

 

         

ರಾಷ್ಟ್ರೀಯ ನಾಟಕ ಶಾಲೆ

(ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿನ

ಒಂದು ಸ್ವಾಯತ್ತ ಸಂಸ್ಥೆ)

ಬೆಂಗಳೂರು ಕೇಂದ್ರ  

       

“ಅಭಿನಯದಲ್ಲಿ ಒಂದು ವರ್ಷದ ತೀವ್ರತಮ ಕೋರ್ಸ್ “

ರಾಷ್ಟೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರ ಅಭಿನಯದಲ್ಲಿ ತೀವ್ರತಮವಾದ ಒಂದು ವರ್ಷದ ಕೋರ್ಸ್ ಆಗಿದ್ದು, 25ನೇ ಜುಲೈ 2017 ರಿಂದ  ಬೆಂಗಳೂರಿನ ಕಲಾಗ್ರಮದಲ್ಲಿ ಪ್ರಾರಂಭವಾಗಲಿದೆ. ದಕ್ಷಿಣ ಪ್ರಾಂತ್ಯಗಳ (ಕರ್ನಾಟಕ, ಸೀಮಾಂದ್ರ, ತೇಲಂಗಾಣ, ತಮಿಳುನಾಡು, ಕೇರಳ ಹಾಗು ಪಾಂಡಿಚೆರಿ ಮತ್ತು ಲಕ್ಷದ್ವೀಪಗಳ ಕೇಂದ್ರಾಡಳಿತ ಪ್ರದೇಶಗಳು) ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು ಸೀಟುಗಳ ಸಂಖ್ಯೆ 20. ಆಯ್ಕೆಯಾದ ವಿದ್ಯಾರ್ಥಿಗಳು ಬೆಂಗಳೂರು ಸೆಂಟರ್ ನಿಂದ ಒದಗಿಸಲ್ಪಡುವ ಹಾಸ್ಟೆಲ್ ನಲ್ಲಿ ಇರಬೇಕಾದದ್ದು ಕಡ್ಡಾಯ. ಕಲಿಕೆಯ ಮಾಧ್ಯಮ ಇಂಗ್ಲಿಷ್ ಆಗಿರುತ್ತದೆ. ಪ್ರದರ್ಶನಗಳು ದಕ್ಷಿಣ ಭಾರತದ  ಬಹುಭಾಷೀಯವಗಿರುತ್ತವೆ. ಪರೀಕ್ಷೆ ಬರೆಯುವ ಭಾಷೆ ಇಂಗ್ಲಿಷ್ ಅಥವಾ ದಕ್ಷಿಣ ಪ್ರಾಂತ್ಯಗಳ ಯಾವುದೇ ಭಾಷೆಯಾಗಿರುವುದು.

ಅಗತ್ಯ ವಿದ್ಯಾರ್ಹತೆಗಳು : 

1.      ಕನಿಷ್ಟ ವಿದ್ಯಾರ್ಹತೆ ಅಂಗೀಕೃತ ವಿಶ್ವವಿದ್ಯಾಲಯವೊಂದರಿಂದ ಸ್ನಾತಕ ಅಥವಾ ಯಾವುದೇ ವಿಷಯದಲ್ಲಿ ಪದವಿಯಾಗಿದ್ದು, ಬುಡಕಟ್ಟು , ಜಾನಪದ ಮತ್ತು ಸಾಂಪ್ರದಾಯಿಕ ಪ್ರದರ್ಶಕ ಕಲಾ ಕುಟುಂಬಗಳ ಅತ್ಯಂತ ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಡಲಿಕೆ ನೀಡಬಹುದಾಗಿದೆ .

2.      ಕನಿಷ್ಟ 4 ರಂಗ ನಿರ್ಮಿತಿಗಳಲ್ಲಿ ಪಾಲ್ಗೊಂಡಿದ್ದು ರಂಗಭೂಮಿಯಲ್ಲಿ ಸಾಕಷ್ಟು ತಿಳುವಳಿಕೆ ಹೊಂದಿರಬೇಕು.

ವಯಸ್ಸು : 1 ನೇ ಜೂನ್ 2017ರಂದು ಕನಿಷ್ಟ 21 ಮತ್ತು ಗರಿಷ್ಟ 30 ವರ್ಷಗಳಿರಬೇಕು .

ಮೀಸಲು ಪ್ರವರ್ಗಗಳ ಅಭ್ಯರ್ತಿಗಳಿಗೆ ನಿಯಮಾನುಸಾರ ಮೀಸಲಾತಿ ಮತ್ತು ವಯೋಮಿತಿ ಸಡಲಿಕೆ ಇರುತ್ತದೆ.

ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೂ ಮಾಸಿಕ ರೂ.4500/- ಗಳ ವಿದ್ಯಾರ್ಥಿ ವೇತನ ನೀಡಲಾಗುವುದು.

ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು ಗರಿಷ್ಠ ಜೂನ್ 25, 2017 ಒಳಗೆ Camp Director,NSD Bengaluru centre, ಕಲಾಗ್ರಾಮ, ಮಲ್ಲತ್ತಳ್ಳಿ, (ಬೆಂಗಳೂರು ವಿಶ್ವವಿದ್ಯಾಲಯ ಹಿಂಬಾಗ), ಬೆಂಗಳೂರು-560056 ಗೆ ಕಳುಹಿಸಬೇಕು. ನಿಗದಿತ ಅರ್ಜಿಗಳನ್ನು ಏಪ್ರಿಲ್ 30 2017ರಿಂದ ನಮ್ಮ ವೆಬ್ ಸೈಟ್ :www.nsd.gov.in ನಿಂದ ಡೌನ್ ಲೋಡ್ ಮಾಡಬಹುದು

ಅಥವಾ ಏನ್ ಎಸ್ ಡಿ, ಬೆಂಗಳೂರು ಸೆಂಟರ್ , ಕಲಾಗ್ರಾಮ, ಮಲ್ಲತ್ತಳ್ಳಿ, (ಬೆಂಗಳೂರು ವಿಶ್ವವಿದ್ಯಾಲಯ ಹಿಂಬಾಗ), ಬೆಂಗಳೂರು-560056  ಇಲ್ಲಿಂದ ಕಚೇರಿ ವೇಳೆಯಲ್ಲಿ ನೇರವಾಗಿ ಪಡೆಯಬಹುದು.

ಅರ್ಜಿಯೊಂದಿಗೆ ಏನ್ ಎಸ್ ಡಿ, ಬೆಂಗಳೂರು ಚಾಪ್ಟರ್ ಹೆಸರಿಗೆ ರೂ.150 /-ರ ಡಿ ಡಿ ಲಗತ್ತಿಸಬೇಕು.

ಅರ್ಹ ಅರ್ಜಿದಾರರು ಶಾರೀರ ಪರೀಕ್ಷೆ / ಅಭಿನಯ ಪರೀಕ್ಷೆಗಳಿಗೆ 1, 2 ಮತ್ತು 3 ಜೂನ್ 2017 ರಂದು ತಮ್ಮ ಸ್ವಂತ ವೆಚ್ಚದಲ್ಲಿ ಹಾಜರಾಗಬೇಕು. ಹೆಚ್ಹಿನ ವಿವರಗಳಿಗೆ ಕಚೇರಿ ವೇಳೆಯಲ್ಲಿ 080-23183027/ nsd.bengaluruchapter@gmail.com ಸಂಪರ್ಕಿಸಿ.

Recent Posts